ಮೈಸೂರು, ಜುಲೈ 17 : ಪ್ರೇಮಕುಮಾರಿ ಹಾಗೂ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಮಧ್ಯ ರಾಜೀ-ಸಂಧಾನ ಆಗುವವರೆಗೆ ಇಂಥ ಎಷ್ಟು ಸುದ್ದಿ ಬರೆಯಬೇಕಾಗಬಹುದೋ ಗೊತ್ತಿಲ್ಲ. ಇಲ್ಲಿನ ಚಾಮುಂಡಿಪುರಂನಲ್ಲಿ ಇರುವ ರಾಮದಾಸ್ ಕಚೇರಿಗೆ ಪ್ರೇಮಕುಮಾರಿ ಹಾಗೂ ಅವರ ತಾಯಿ ತೆರಳಿದ್ದರು. ಅದೇನಾದರೂ ಆಗಲಿ, ಈಗಿಂದ ಈಗಲೇ ರಾಮದಾಸ್ ರನ್ನು ನೋಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇವರು ಹೀಗೆ ಹಠ ಮಾಡುವ ಹೊತ್ತಿಗೆ, ಕಚೇರಿಯಲ್ಲಿದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಚೇರಿಗೆ ಬಂದ ಕೆ.ಆರ್. ಠಾಣೆಯ ಪೊಲೀಸರು, ಹೀಗೆಲ್ಲ ಶಾಸಕರ ಕಚೇರಿಯಲ್ಲಿ ಗಲಾಟೆ ಮಾಡಬಾರದು. ನಿಮ್ಮ ಸಮಸ್ಯೆ ಏನಿದ್ದರೂ ಕಾನೂನು ಪ್ರಕಾರ ಬಗೆಹರಿಸಿಕೊಳ್ಳಿ ಎಂದು ಹೊರಗೆ ಕಳುಹಿಸಿದ್ದಾರೆ.